" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Friday, March 4, 2011

ಆಪೋಶನ ಮತ್ತು ವಸಂತ

ಅಂತರಂಗದ  
ಎದೆಯೊಳಗೆ
ನಿಗಿ ನಿಗಿ ಬೆಂಕ್ಕಿ  ಜ್ವಾಲೆ 
ಆರುತ್ತಲೆ ಇಲ್ಲ   
 ಅದು ಇನ್ನು ಇನ್ನು
 ಜ್ವಲಿಸುತಲೇ  ಇದೆ
 ಅಂದು ಸರಿ ಯೆನಿಸಿದ್ದು
 ಇಂದು  ಯಾಕೋ   ತಪ್ಪೆನಿಸುತ್ತಿದೆ .
 ಖರೆ ಹೇಳುತ್ತೇನೆ ,
 ನಾನು ತಿಳಿದು ಮಾಡಿದ ತಪ್ಪಲ್ಲ
 ಅಂದಿನ ಕಾಲ ದಿನ ಮಾನ ಗಳೇ   ಹಾಗೆ 
ಅಂದು ಸರಿ ...ಇಂದು ತಪ್ಪು ...ಮುಂದೆ .....?
 ಆಶ್ಚರ್ಯವೆಂದರೆ
 ಎದೆಯೊಳಗಿನ 
ಬೆಂಕಿ  ಜ್ವಾಲೆ  ಇನ್ನು ನಿಗಿ ನಿಗಿ 
.ಅಂದು ನೆಟ್ಟ    ಬೀಜಗಳೆಲ್ಲಾ 
 ಮೊಳಕೆ   ಹೊಡೆದು ......  ಮರಗಳಾಗಿ
.ಇಂದು  ನೆರಳ     ನಿಡುತ್ತಿ ವೆ
 ಒಮೊಮ್ಮೆ ಸುಮ್ಮನೆ ನಡೆದು
ಹೋಗುತ್ತೇನೆ 
ಅವುಗಳ ಬಳಿಗೆ .
,ಅವು ನನ್ನ ನೋಡಿ
 ಹೆಮ್ಮೆಯಿಂದ ನಕ್ಕಂತೆ  ಅನಿಸುತ್ತದೆ .
ಜಾ ಗತೀ ಕರಣ,ಉದಾರೀ ಕರಣ ,ದ  .
 ಸುನಾಮಿಗೆ ಸಿಕ್ಕ ನನ್ನೂರು ...
 ಭೂಪಟದಿಂದಲೇ
 ಕಾಣೆಯಾಗ ಬಹುದೆಂದು
 ಆತಂಕದಿಂದ ಅವುಗಳೆಡೆಗೆ ನಡೆದೇ ...
.ಯಾಕೋ ಅವುಗಳ ಕಂಣಿದ ಕಣ್ಣೀರು
 ನಿಲ್ಲುವ ಸೂಚನೆ ಇಲ್ಲ .  
 ಯಾಕೋ ನನ್ನೆದೆಯೊಳಗಿನ
 ಬೆಂಕಿಯಜ್ವಾಲೆ ಸುನಾಮಿಯಂತೆ 
 ಎತ್ಹರ  ಎತ್ಹರಕ್ಕೆ ಬೆಳೆದು ,
 ಜಾ ಗತೀ ಕರಣ ,ಉದಾರೀ ಕರಣವನ್ನ
  ಆಪೋಶನ ತೆಗೆದು  ಕೊಳ್ಳುವುದನ್ನ ಕಂಡು
 .ವಸಂತ  ಮೆಲ್ಲ --ಮೆಲ್ಲನೆ ನಡೆದು ಬಂದ ,     

No comments:

Post a Comment