" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Tuesday, July 30, 2013

    ಕೆ ಜಿ ಗೆ ಒಂದು ರೂ ಅಕ್ಕಿ

ನಿಮ್ಮ ಸ್ವಾರ್ಥಕ್ಕೆ 
ನಮ್ಮ ಸ್ವಾಭಿಮಾನ 
ಕಸಿದು  ಕೊಂಡವರೆ 
ಧಿಕ್ಕಾರವಿರಲಿ ನಿಮಗೆ .
ಈ ನೆಲದ 
ನಿಜ ವಾರಸುದಾರರು ನಾವು 
ಇಲ್ಲಿನ ಸಮಸ್ತಕ್ಕು
ನಾವೆ ಹಕ್ಕುದಾರರು 
ನೀವು ನೀಡುವ
ಕೆ ಜಿ ಗೆ ಒಂದು ರೂ ಅಕ್ಕಿ 
ಬಿಕ್ಷೆಯಲ್ಲ 
ಅದು ನೀವು 
ಶತಮಾನಗಳಿಂದ 
ನಮ್ಮನ್ನ ತಿಂದು ತೇಗಿದಕ್ಕೆ
ಕಟ್ಟುವ ದಂಡ . 
ಎಚ್ಚರವಿರಲಿ ನಿಮಗೆ 
ನಮಗೆ ತಿಳಿದಿದೆ 
ನಿಮ್ಮ ಅನುಕಂಪದ 
ಹಿಂದಿನ ಹುನ್ನಾರ 
ನಮಗೆ ಬೇಕಿರುವುದು 
ನೀವು ಕಸಿದುಕೊಂಡ 
ಅಕ್ಷರ ,ಸ್ವಾತಂತ್ರ್ಯ,  ಸ್ವಾಭಿಮಾನ  
ಮಾತ್ರ 
ಅದಕ್ಕೆ ನಾವು 
ಬಿತ್ತುತ್ತಿದ್ದೇವೆ 
ಸಮತೆಯ ಬೀಜ 
ಆಗ ನಾವು 
ನಿಡಲಿದ್ದೇವೆ ನಿಮಗೆ 
ಉಚಿತ ಅಕ್ಕಿ . 

Friday, July 19, 2013

ಗಂಗೆಕ್ಷಮೆಯಾಚಿಸು

ಏನು ಶಿವ 
ನಿನ್ನ ಸ್ಥಿತಿ
ಏಕೆ ಹೀಗಾಯಿತು
ಗಂಗೆ ಏಕೆ 
ಈ ಪರಿ ರೌದ್ರಾವತಾರ 
ತಾಳಿದಳು
ನಿನ್ನ ಮೇಲಿನ ಸಿಟ್ಟಿಗೆ 
ನಿನ್ನ ನಂಬಿದವರನ್ನ
ಆಪೋಷಣ
ತೆಗೆದು ಕೊಂಡಳಲ್ಲ 
ಭೂಮಿ ಆಕಾಶ ಗಳು
ಅವಳ ಸಿಟ್ಟಿಗೆ
ಏಕಾದ ಪರಿ ಕಂಡು
ದೇವ ಭೂಮಿಯಒಡಲು 
ಬರಿ ದಾಯಿತಲ್ಲ
ದೇವ .
ಹುಲು ಮಾನವರಿರಲಿ
ನಿನ್ನನೆ  
ನೀರಲ್ಲಿ ಮುಳುಗಿಸಿದಳಲ್ಲ
ಆ 
ನಿನ್ನ ಗಂಗಾಮಾಯಿ . 
ಬಿಡು ನೀನು
ಅವಳನ್ನ ಚನ್ನಾಗಿ 
ಗಮನಿಸಿದಂತೆ ಕಾಣುತ್ತಿಲ್ಲ . 
ಅದಕ್ಕೆ 
ಈ ಪರಿ ದುರಂತ 
ನಿನ್ನ ದೇವ ಭೂಮಿಯ
ತುಂಬೆಲ್ಲ್ಲಾ 
ಹೆಣಗಳ ರಾಶಿ ರಾಶಿ .
ನೋ೦ದವರೆಷ್ಟೋ
ಕಾಣೆಯಾದವರೆಷ್ಟೋ
ಅನಾಥರಾದವರೆಷ್ಟೋ.... ,
ನಿನ್ನ ನಂಬಿ ಬಂದವರಲ್ಲ ಅವರು ! 
ಪಾಪ ದ ಜನ .
ನೋಡು ಶಿವ 
ಈಗಲಾದರು
ಗಂಗೆ ಬಳಿ ತೆರಳಿ
ಕ್ಷಮೆಯಾಚಿಸು . 
ನಿನ್ನ ನಂಬಿ 
ಅಳುದುಳಿದವರ 
ಬದುಕಾದರು ಹಸನಾಗಲಿ . 

Tuesday, January 29, 2013

ಕಾಣೆಯಾದ ನನ್ನವರು

ಬಿಕರಿಗಿಟ್ಟ
ಮಾಲು
ಮಹಲುಗಳ ನಡುವೆ
ಕಾಣೆಯಾದ
ನನ್ನವರ ಹುಡುಕುತ್ತ
ಅಲೆಯುತ್ತಿದ್ದೇನೆ .
ಮಹಲುಗಳಿ೦ದ
ಮಹಲುಗಳಿಗೆ....

ಆದರು
ಸಿಗಲಿಲ್ಲ ಅವರು ?
ತುತ್ತು ಕೂಳಿಗೆ
ಗುಳೆ ಬ೦ದ
ಅವರನ್ನ
ಹುಡುಕುತ್ತಲೆಇದ್ದೇನೆ.

ಬೀದಿಯಲ್ಲಿ ಚಲ್ಲಿದ
ಅನ್ನದ ಅಗುಳುಗಳಲ್ಲಿ,

ಚರ೦ಡಿಯಲ್ಲಿ
ನೀರಾಗಿ ಹರಿದ
ಅವರ ಕನಸುಗಳ
ಬೆನ್ನತ್ತಿಅಲೆಯುತ್ತಿದ್ದೇನೆ ,

ರಾಜಕೀಯ
ಕೊಚ್ಚೆಯಲ್ಲಿ ಮುಳುಗಿದರ ,

ಕಾಕೀಯ
ಕ್ರೌಯ್ರಕ್ಕೆ ಸಿಕ್ಕಿ ನಲುಗಿದರಾ ,

ಕಾವಿಯ
ಕೊಳಕಿನಲ್ಲಿ ಹೂತು ಹೋದರ
ಎ೦ದು ಹುಡುಕುತ್ತಿದ್ದೇನೆ.

ಹೈ ಟಿ , ಬಿ ಟಿ ದೂಳಿನಲ್ಲಿ
ಮರೆಯದರಾ
.
ಇಲ್ಲಾ

ಕತ್ತಲು ರಾತ್ರಿಯ
ಮಾಲುಗಳಾದರಾ ,
ಅನುಮಾನ ನನಗೆ

ಕೊ೦ಚ
ಸಹಾಯ ಹಸ್ತ
ನೀಡುವಿರಾ
ಅವರ ಹುಡುಕಲು . 

Wednesday, January 9, 2013

ಪ್ರೀತಿ 

ಯಾಕೆ 
ಈ ಜನ
ಈ ಪರಿ 
ಪ್ರೀತಿಪ್ರೇಮದ
ಪರಾಯಣ ಮಾಡುತ್ತಾರೆ
ಹಾಡುತ್ತಾರೆ ನಲಿಯುತ್ತಾರೆ
ಅವರನ್ನೆಮರೆತು
ಮರೆಯಾಗುವ ತನಕ
ಕಳೆ 
ಬರಹ 
ಆದರು 
ಶತ-ಶತಮಾನಗಳಿ೦ದ 
ಚಕ್ರ ಸುತ್ತುತ್ತಲೆ ಇದೆ 
ಅದರ ಸುತ್ತ
ಜಗದಸುತ್ತ
ಅದರದೆ ಧ್ಯಾನ
ಚಕ್ರವಾಕದ೦ತೆ. 
ಕಾಣೆಯಾದ ಕನಸುಗಳು
ಮರೆಯಾದ ಮಮತೆ 
ಮುಖವಾಡ ಕಳಚಿದ ಆತ್ಮರತಿ 
ಆದರು 
ಅದರದೆಆಲಾಪನೆ.
ಅದು ಇದು ಎಲ್ಲವನ್ನ
ಕೆಡವಿ ಕೊಡವಿದರೆ
ಆಕಾಶದತು೦ಭಾ
ಕಾಮನಬಿಲ್ಲು
ಅದಕ್ಕೆ ಇರಬೇಕು
ಅದು ಪ್ರೀತಿ 
. .