" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Wednesday, March 16, 2011

" ಅಗ್ನಿ ದಿವ್ಯದಂತೆ "

 ಏಕೆ  ?
ಈ ಪರಿ   ವ್ಯಗ್ರ ನಾಗಿ  ಮುನಿದೆ
ಫೆಸಿಪಿಕ್.   
ಅವರು ಮಾಡಿದ ತಪ್ಪಾದರು
 ಏನು ?
 ನೀನು ಹೇಳಿದ್ದು ಖರೆ .
 ಅಣು  ರಿಯಾಕ್ಟರಗಳನ್ನ 
 ಸ್ಥಾಪಿಸ    ಬೇಡಿರೆಂದು  ಹೇಳಿದ್ದೆ , 
.ಅದೊಂದು ತಪ್ಪು ಮಾಡಿದರು. 
,ಅದಕ್ಕೆನೀನು  ಈ ಪರಿ ಮುನಿದು 
 ಮುಗಿಲೆತ್ತರದ
 ರಕ್ಕಸ ಅಲೆಗಳನ್ನ  ಸೃಷ್ಟಿಸಿ
 ಅವರ
 ಮನೆ- ಮನಸ್ಸು
 ಗುಡಿ- ಗುಂಡಾರ
 ಅಸೆ -ಕನಸು
 ಮಾತ್ರವಲ್ಲ
.ಅವರ ಇಡಿ ಬದುಕನ್ನ
 ಗುಡಿಸಿ ಬಿಟ್ಟಿಯಲ್ಲ  
 ಅವರದಲ್ಲದ ಅಪರಾದಕ್ಕೆ  
 ತಪಿಲ್ಲದ  ತಪ್ಪಿಗೆ 
 ನೀನು  ಇಸ್ಟೋಂದು 
 ಕ್ರೂರಿ  ಯಾಗಬಹುದಾ..
 ಭೂಮಿ  ತಾಯಿ ಗುಡಿಗಿದ್ದು
 ಸತ್ಯ .
 ಚಂದ್ರ  .ಆಸೆ ಕಂಗಳಿಂದ  
 ಭೂಮಿಯತ್ತ    ತೆವಳುತ್ತಿರವುದು .........
 ಸತ್ಯ .
.ಆದರೆ  ನಿನ್ನ ಆಪೋಶನಕ್ಕೆ
 ಬಲಿಯಾದವರ ಆತ್ಮಗಳಿಗೆ 
 ಉತ್ತರ ಕೊಡುವವರಾರು  ?
 ಒಂದು ನೆನಪಿರಲಿ ನಿನಗೆ 
ಇತಿಹಾಸದ ಪುಟವನ್ನ ತೆರೆದು ನೋಡು
 ಹೇಳಿ ಹೆಸರಿಲ್ಲವಾದ
 ಜಪಾನಿಯರು
 ಮತ್ತ್ತೆ- ಮತ್ತೆ ಎದ್ದು  ನಿ೦ತ  ಪರಿ 
  ನೋಡುತ್ತಿರು ನೀನು .
 ನಿನ್ನ ಕಾಲಗರ್ಭದೊಳಕ್ಕೆ ಹೂತಿಟ್ಟು
 " ಅಗ್ನಿ  ದಿವ್ಯದಂತೆ "  
 ಅವರು ಬೆಳೆದು ನಿಲ್ಲುವ ಪರಿ 
.ಅದಕ್ಕೆ ಅವರನ್ನ
 ಜಪಾನಿಯರು ಎಂದು ಕರೆಯುವುದು .     

2 comments:

  1. ಜಪಾನೀಸ್ ಜಿಂದಾಬಾದ್! ಚೆನ್ನಾಗಿದೆ ನಿಮ್ಮ ಆಶಯ.

    ReplyDelete
  2. ಜಪಾನಿಯರ ಅಧಮ್ಯ ಚೈತನ್ಯದ ಬಗ್ಗೆ ರಚಿತವಾದ ಸೊಗಸಾದ ಕವನ , ಅಭಿನ೦ದನೆಗಳು.

    ReplyDelete