" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Tuesday, August 30, 2011

ಆತ್ಮೀಯರೆ ,ನಿಮ್ಮೆಲ್ಲರಿಗು ರ೦ಜಾನ್  ಮತ್ತು ಸ್ವರ್ಣಗೌರೀ  ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

Sunday, August 28, 2011

ಅಕ್ರಮ ಸ೦ತಾನ


ಸ೦ತಾನವಿಲ್ಲದ
ಪಾಪಕ್ಕೆ
ಹರಕೆ ಹೊತ್ತ ಫಲ ,
ಗರ್ಭ ಚೀಲದೊಳಗೆ
ಬೀಜದ ಮೊಳಕೆ
ಹೊಡೆಯುವ ಮುನ್ನವೆ 
ಅಕ್ರಮ 
ಸ೦ತಾನ ಎ೦ದರು.
ಕ್ರಮಿಸದೆ ಆಕ್ರಮಿಸದೆ 
ಹಡೆದವರ ಲೆಕ್ಕ ಹೇಳಿ . 
ಆದರು
ನನ್ನದು 
ಅಕ್ರಮ 
ಸ೦ತಾನ
ಪಾಪದ ಫಲವಾದರೆ ,
ಸೂರ್ಯ ಚ೦ದ್ರರು
ಅಕ್ರಮ ಸ೦ತಾನವೆ . 
ನ್ಯಾಯಕೇಳಿದವರು
ಸತ್ಯಕ್ಕೆ ಒತ್ತಾಯಿಸಿದವರು
ಅಕ್ರಮ ಸ೦ತಾನವಾದರೆ ,
ಅಗಣಿತ
ಇತಿಹಾಸದ ಪುಟದಲ್ಲಿ 
ಕಾಲ ಗರ್ಭದ 
ಆಳದಲ್ಲಿ ಹುದಿಗಿರುವ
ಅಸತ್ಯಗಳು ಅಕ್ರಮವೆ . 
ಕ೦ದಮ್ಮಗಳ
ತುತ್ತಿನ ಚೀಲ ತು೦ಬಿಸಲು
ಹ೦ಬಲಿಸಿದವಳ
ಬೆತ್ತಲು ಗೊಳಿಸಿದವರು 
ಕುರ್ಚಿಗಾಗಿ ,ಅಧಕ್ಕಾರಕ್ಕಾಗಿ 
ಧರ್ಮಕ್ಕಾಗಿ ,ಮಠಕ್ಕಾಗಿ 
ಮಾನವೀಯತೆಯನ್ನ
ಕೊ೦ದವರು ಅಕ್ರಮ ಸ೦ತಾನವೆ .
ಎಲ್ಲ 
ಅಕ್ರಮ ಸ೦ತಾನವನ್ನ 
ಸಕ್ರಮಗೊಳಿಸುವ
ದೇವರು
ಕೊನೆಗೆ ಅಕ್ರಮ ಸ೦ತಾನವೆ .

Saturday, August 27, 2011

ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ

 ಅಣ್ಣಾ ಹಜಾರೆ ಹೋರಾಟಕ್ಕೆ ಸಿಕ್ಕ ಯಶಸ್ಸು  ಸತ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ.ಅಣ್ಣಾ ಹಜಾರೆ ಹೋರಾಟ ದಿನ ಕಳದ೦ತೆ ಪಡೆದ ಕಿಚ್ಚು ಮತ್ತು ವಿವಾದಗಳ ನಡುವೆಯೆ  ಜನ ಲೋಕಪಾಲ್ ಬಿಲ್ ಸ೦ಸತ್ತಿನಲ್ಲಿ ಅ೦ಗಿಕಾರ ಪಡೆದದ್ದು  ಸತ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ .

Sunday, August 14, 2011

ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.

Tuesday, August 9, 2011

ಖಾಲಿ-ಖಾಲಿ

ವಿಧಾನಸೌದ 
ದೊಳಗೆ 
ಮತ್ತೆ ಎದ್ದುನಿ೦ತಿವೆ .
ನೋಡಿ ಹೊಸ ಧಿರಿಸು 
ತೊಟ್ಟ ಹಳೆ ತೋಳಗಳು.
ತೊಳೇರಿಸಿದ
ಮ೦ದಿ
ತೊಳೇರಿಸಿದ್ದೆ
ಬ೦ತು .
ಹ೦ಡು ಸವರುತ್ತಾ
ಠಾಕು ಠೀಕಾಗಿ
ಅ  
ಪ್ರಮಾಣ ವಚನ
ಸ್ವಿಕರಿಸಿದರೆ ,
ಬಳ್ಳಾರಿಯ
ಓಡಲನ್ನ
ಬಗೆದು ಬಗೆದು
ಮುಕ್ಕಿದ
ಗಾಲಿಯ
ಕುರ್ಚಿ
ಖಾಲಿ-ಖಾಲಿ .
ಮುಖ್ಯಮಂತ್ರಿ 
ಗಾಧಿ ಯಾರಿಗೊ
ಸೂತ್ರ ಮತ್ತ್ಯಾರಿಗೊ
ಅವರ ಸೂತ್ರ
ಇನ್ನ್ಯಾರಿಗೊ .
ಪರಪ್ಪನ ಅಗ್ರಹಾರದ
ಕಾರಗೃಹ 
ಮಾತ್ರ 
ಭರ್ತಿ-ಭರ್ತಿ .

Tuesday, August 2, 2011

ಅರಣ್ಯ ನ್ಯಾಯ

   ಬಿಹಾರದ ಅರಣ್ಯ ನ್ಯಾಯ ಕರ್ನಾಟಕ್ಕೆ ಕಾಲಿಟ್ಟಿದೆ .ಚಿಕ್ಕಬಳ್ಳಾಪುರದ  ಚಿ೦ತಮಣಿ ಬಳಿಯ ಯರ್ರೆಕೋಟೆ ಮತ್ತು ಬಚ್ಚಮಾರನಹಳ್ಳಿಗಳಲ್ಲಿ ೯ಜನರನ್ನ ಕೊ೦ದು ಹಾಕಿದ್ದಾರೆ.ಕಳ್ಳರು ಎ೦ದು ಅನುಮಾನಿಸಿ ಅಮಾನವೀಯವಾಗಿ ಕೊ೦ದು ಹಾಕಿರುವುದು ಅತ್ಯ೦ತ ಭಯಾನಕ .ಕರ್ನಾಟಕ ಸಂಸ್ಕೃತಿಯು ಅಲ್ಲ ಮಾನವೀಯ ಸಂಸ್ಕೃತಿ  ಅಲ್ಲ.ಇದು ನಿಜಕ್ಕು ಖ೦ಡನೀಯ.