" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Sunday, August 28, 2011

ಅಕ್ರಮ ಸ೦ತಾನ


ಸ೦ತಾನವಿಲ್ಲದ
ಪಾಪಕ್ಕೆ
ಹರಕೆ ಹೊತ್ತ ಫಲ ,
ಗರ್ಭ ಚೀಲದೊಳಗೆ
ಬೀಜದ ಮೊಳಕೆ
ಹೊಡೆಯುವ ಮುನ್ನವೆ 
ಅಕ್ರಮ 
ಸ೦ತಾನ ಎ೦ದರು.
ಕ್ರಮಿಸದೆ ಆಕ್ರಮಿಸದೆ 
ಹಡೆದವರ ಲೆಕ್ಕ ಹೇಳಿ . 
ಆದರು
ನನ್ನದು 
ಅಕ್ರಮ 
ಸ೦ತಾನ
ಪಾಪದ ಫಲವಾದರೆ ,
ಸೂರ್ಯ ಚ೦ದ್ರರು
ಅಕ್ರಮ ಸ೦ತಾನವೆ . 
ನ್ಯಾಯಕೇಳಿದವರು
ಸತ್ಯಕ್ಕೆ ಒತ್ತಾಯಿಸಿದವರು
ಅಕ್ರಮ ಸ೦ತಾನವಾದರೆ ,
ಅಗಣಿತ
ಇತಿಹಾಸದ ಪುಟದಲ್ಲಿ 
ಕಾಲ ಗರ್ಭದ 
ಆಳದಲ್ಲಿ ಹುದಿಗಿರುವ
ಅಸತ್ಯಗಳು ಅಕ್ರಮವೆ . 
ಕ೦ದಮ್ಮಗಳ
ತುತ್ತಿನ ಚೀಲ ತು೦ಬಿಸಲು
ಹ೦ಬಲಿಸಿದವಳ
ಬೆತ್ತಲು ಗೊಳಿಸಿದವರು 
ಕುರ್ಚಿಗಾಗಿ ,ಅಧಕ್ಕಾರಕ್ಕಾಗಿ 
ಧರ್ಮಕ್ಕಾಗಿ ,ಮಠಕ್ಕಾಗಿ 
ಮಾನವೀಯತೆಯನ್ನ
ಕೊ೦ದವರು ಅಕ್ರಮ ಸ೦ತಾನವೆ .
ಎಲ್ಲ 
ಅಕ್ರಮ ಸ೦ತಾನವನ್ನ 
ಸಕ್ರಮಗೊಳಿಸುವ
ದೇವರು
ಕೊನೆಗೆ ಅಕ್ರಮ ಸ೦ತಾನವೆ .

1 comment: