" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Tuesday, January 29, 2013

ಕಾಣೆಯಾದ ನನ್ನವರು

ಬಿಕರಿಗಿಟ್ಟ
ಮಾಲು
ಮಹಲುಗಳ ನಡುವೆ
ಕಾಣೆಯಾದ
ನನ್ನವರ ಹುಡುಕುತ್ತ
ಅಲೆಯುತ್ತಿದ್ದೇನೆ .
ಮಹಲುಗಳಿ೦ದ
ಮಹಲುಗಳಿಗೆ....

ಆದರು
ಸಿಗಲಿಲ್ಲ ಅವರು ?
ತುತ್ತು ಕೂಳಿಗೆ
ಗುಳೆ ಬ೦ದ
ಅವರನ್ನ
ಹುಡುಕುತ್ತಲೆಇದ್ದೇನೆ.

ಬೀದಿಯಲ್ಲಿ ಚಲ್ಲಿದ
ಅನ್ನದ ಅಗುಳುಗಳಲ್ಲಿ,

ಚರ೦ಡಿಯಲ್ಲಿ
ನೀರಾಗಿ ಹರಿದ
ಅವರ ಕನಸುಗಳ
ಬೆನ್ನತ್ತಿಅಲೆಯುತ್ತಿದ್ದೇನೆ ,

ರಾಜಕೀಯ
ಕೊಚ್ಚೆಯಲ್ಲಿ ಮುಳುಗಿದರ ,

ಕಾಕೀಯ
ಕ್ರೌಯ್ರಕ್ಕೆ ಸಿಕ್ಕಿ ನಲುಗಿದರಾ ,

ಕಾವಿಯ
ಕೊಳಕಿನಲ್ಲಿ ಹೂತು ಹೋದರ
ಎ೦ದು ಹುಡುಕುತ್ತಿದ್ದೇನೆ.

ಹೈ ಟಿ , ಬಿ ಟಿ ದೂಳಿನಲ್ಲಿ
ಮರೆಯದರಾ
.
ಇಲ್ಲಾ

ಕತ್ತಲು ರಾತ್ರಿಯ
ಮಾಲುಗಳಾದರಾ ,
ಅನುಮಾನ ನನಗೆ

ಕೊ೦ಚ
ಸಹಾಯ ಹಸ್ತ
ನೀಡುವಿರಾ
ಅವರ ಹುಡುಕಲು . 

Wednesday, January 9, 2013

ಪ್ರೀತಿ 

ಯಾಕೆ 
ಈ ಜನ
ಈ ಪರಿ 
ಪ್ರೀತಿಪ್ರೇಮದ
ಪರಾಯಣ ಮಾಡುತ್ತಾರೆ
ಹಾಡುತ್ತಾರೆ ನಲಿಯುತ್ತಾರೆ
ಅವರನ್ನೆಮರೆತು
ಮರೆಯಾಗುವ ತನಕ
ಕಳೆ 
ಬರಹ 
ಆದರು 
ಶತ-ಶತಮಾನಗಳಿ೦ದ 
ಚಕ್ರ ಸುತ್ತುತ್ತಲೆ ಇದೆ 
ಅದರ ಸುತ್ತ
ಜಗದಸುತ್ತ
ಅದರದೆ ಧ್ಯಾನ
ಚಕ್ರವಾಕದ೦ತೆ. 
ಕಾಣೆಯಾದ ಕನಸುಗಳು
ಮರೆಯಾದ ಮಮತೆ 
ಮುಖವಾಡ ಕಳಚಿದ ಆತ್ಮರತಿ 
ಆದರು 
ಅದರದೆಆಲಾಪನೆ.
ಅದು ಇದು ಎಲ್ಲವನ್ನ
ಕೆಡವಿ ಕೊಡವಿದರೆ
ಆಕಾಶದತು೦ಭಾ
ಕಾಮನಬಿಲ್ಲು
ಅದಕ್ಕೆ ಇರಬೇಕು
ಅದು ಪ್ರೀತಿ 
. .