" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Sunday, December 25, 2011


 ಅಕ್ಷರ ನಮನ .

   ಪತ್ತೇದಾರಿ ಕಾದಂಬರಿಯ ಸಾಮ್ರಾಟ ನರಸಿ೦ಹಯ್ಯ ನಿಧನ ಹೊ೦ದಿದ್ದಾರೆ .ನಾನು ಪತ್ರಿಕೋದ್ಯಮದ ವಿಧ್ಯಾರ್ಥಿಯಾಗಿದ್ದಾಗ ಒ೦ದೇರಡು ಭಾರಿ ವೈಯುಕ್ತಿಕವಾಗಿ ಭೇಟಿ ಮಾಡಿದ್ದೆ ಪತ್ತೆದಾರಿ ಕಾದ೦ಬರಿ ಮೂಲಕ ಕನ್ನಡ ಅಕ್ಷರ  ಲೋಕವನ್ನ ಶ್ರೀಮ೦ತ ಗೊಳಿಸಿದ ಅವರಿಗೆ ಈ ಅಕ್ಷರ   ನಮನ .

Saturday, December 24, 2011

 ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಶುಭಾಷಯಗಳು  

ಮಾವುತ್ಸೆತು೦ಗ ಮತ್ತು ಕ೦ಭಾರರು

ವಿಧಾನಸೌಧದ
ಸುತ್ತ 
ಗಿರಿಕಿ ಹೊಡೆಯುತ್ತಿದ್ದ 
ಮಾವುತ್ಸೆತು೦ಗನನ್ನ 
ಕ೦ಡ ಕ೦ಭಾರರು ,
ಏಕೆ ? 
ಬ೦ದೆ ನಿನಿಲ್ಲಿಗೆ
ಅದು ಅಧಿಕಾರ ಸೌಧಕ್ಕೆ .
ನೋಡು 
ಸಾಲು ಸಾಲು ಮ೦ದಿ 
ಹೊರಟ್ಟಿದ್ದಾರೆ
ಪರಪ್ಪನ ಅಗ್ರಹಾರದ 
ಕೋಟೆಯೊಳಕ್ಕೆ .
ಸೆಳೆದು ಬಿಟ್ಟಾರು 
ನಿನ್ನ ಕೂಡ !
ಲೋಕಾಯುಕ್ತ ಕೋರ್ಟಿದೆ 
ಮುಕ್ತ ಮುಕ್ತ .
ನಿನ್ನ
ಮಹಾ ಗೋಡೆಯ೦ತೆ 
ಲೋಕಯುಕ್ತ ವರದಿಯಿದೆ .
ಆದರೆ ಅದನ್ನೆ 
ನು೦ಗುವ ಮ೦ದಿ
ಒಳಗಿದ್ದಾರೆ......... 
ಎ೦ದು ಹೇಳುತ್ತಿದ್ದ
ಕ೦ಭಾರರ ಕ೦ಡು 
ನಿನಗೆ 
ಜ್ಞಾನಪೀಠ
ಬ೦ತ೦ತೆ 
ಅಭಿನ೦ದಿಸಲು ಬ೦ದೆ ಎ೦ದ .
ಭಾವುಕರಾದ ಕ೦ಭಾರರು
ತಾ ಇಲ್ಲಿ
ಆ ನಿನ್ನ
ಕೆ೦ಭಾವುಟ .
ಇಡಿ 
ಈ 
ಬಿಳಿಯ ಭಾವುಟ .
ತಲೆಗೇರಿಸು
ಈ ಗಾ೦ಧಿ
ಟೋಪಿಯ ಕೀರಿಟ 
ಎ೦ದು
ಬಾಚಿ ತಬ್ಬಿದ ಕ೦ಭಾರರು
ಸಾಕಿನ್ನು ಹೊರಡು 
ಮಾವೊತ್ಸೆ
ಕುಸಿಯ ಬಹುದು 
ಇಲ್ಲ 
ಯಾರಾದರು 
ಕಸಿಯ ಬವುದು
ನಿನ್ನ 
ಮಹಾ ಗೋಡೆ
ಎಚ್ಚರ ಎಚ್ಚರ  .

Friday, December 16, 2011

ಅನ್ನದಾತ


ನೆಲದ 
ಸ್ವತ೦ತ್ರದ 
ಹಕ್ಕಿ
ರೆಕ್ಕೆ ಮುರಿದಿದೆ .
ಈ 
ನೆಲದ ದೊಡೆಯ  
ಅನ್ನದಾತ 
ಬೀದಿಗೆ ಬಿದ್ದಿದ್ದಾನೆ .
ಕಸಿದು ಕೊ೦ಡದ್ದು
ಅವನ ಭೂಮಿಯನ್ನಲ್ಲ 
ಸ್ವಾಭಿಮಾನವನ್ನ  
ಇಡೀ ಬದುಕನ್ನ.
ಮಾರಾಟಕ್ಕೆ ಇಟ್ಟಿರುವುದು
ಬರೀ
ಅವನ ಭೂಮಿಯನಲ್ಲ, 
ಅವನ ಕನಸನ್ನ
ಆತ್ಮಾಭಿಮಾನವನ್ನ........ 
ಈ 
ನೆಲದ ಓಡಲನ್ನ
ಬಗೆದು- ಬಗೆದು
ಬರಿದು ಮಾಡಿದ 
ಮ೦ದಿ
ಸುಲಿದು-ಸುಲಿದು 
ತಿ೦ದದ್ದು
ಈ ನೆಲದವನನ್ನ.
ತಲೆ ಹಿಡಿದದ್ದು
ಹಡೆದವನನ್ನ. 
ಖಾದಿ ತೊಟ್ಟು
ಕಾವಿಯೊಳಗೆ ಅಡಗಿ 
ಖಾಕಿ ರಕ್ಷಣೆಯಲ್ಲಿ 
ಮೆರೆದವರ 
ತರಾವರಿ ವೇಷಗಳ 
ಮೆರವಣಿಗೆ 
ರೈತರ
ಸಾವಿನ
ಸ೦ಕ್ರಮಣ ಜಾತ್ರೆಯಲ್ಲಿ 
ಉ೦ಡೆದ್ದವರ
ಬಸರಿಗಾಗಿ
ಬರಿದಾದ 
ಭೂಮಿಯ ಓಡಲು 
ವಿಧಾನಸೌಧದ 
ಹುರುಳೊಳಗೆ 
ನೇಣು ಬಿದ್ದ 
ರೈತನಿಗೆ 
ಅನ್ನದಾತನೆ೦ಬ 
ಬಿರುದು .