" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Friday, June 24, 2011

ಗಬ್ಬದ ಜಾತ್ರೆಯಲ್ಲಿ


ಬದುಕ ಜಾತ್ರೆಯಲ್ಲಿ
ಚಲ್ಲಿದ ಮರುಗ-ಜವನಗಳ
ಗಮ್ಮೆನ್ನುವ ಸುವಾಸನೆ
ಜಾತ್ರೆ ತು೦ಬಾ ಹರಡಿದ ದೂಳಿನಲ್ಲಿ
ಬೆರವಗಳಿಗೆಯಲ್ಲಿ
ಬದುಕ ಬಸಿರ ಕಟ್ಟಿದ್ದ
ಅವರ ಕನಸುಗಳ ಜಾತ್ರೆ .
ತೇರ ಎಳವ ಮ೦ದಿ
ಬೀರು ಬ್ರಾ೦ದಿಯಲ್ಲಿ
ಓಲಾಡುವಾಗ
ರಥವೇರಿದ್ದ
ದೇವರು ಬೇವರತೊಡಗಿದಾಗ
ಪಾತರಗಿತ್ತಿ ರೆಕ್ಕೆಬಿಚ್ಚಿ
ಗಗನ ದತ್ತ ಮುಖ ಮಾಡಿತ್ತು
ಅದಾನ - ಇದಾನ ಮೈದಾನದಲ್ಲಿ
ಜಾತ್ರೆಯ ರಾತ್ರಿ
ತಣ್ಣಗೆ  ಜಾರತೊಡಗಿದಾಗ
ಗಬ್ಬಕ್ಕೆ
ಮೈ ಮುದಗೊ೦ಡು
ಮುದುಡಿ ಕೊಳ್ಳುವ ಗಳಿಗೆಯಲ್ಲಿ
ಸೂರ್ಯ
ನಿದಾನಕ್ಕೆ ಮೈಮುರಿಯುತ್ತ
ಮೇಲೆಳುವ ಹೊತ್ತು
ಕೆನೆ ಕೆನೆದು ಸುಸ್ತಾದ ಕುದುರೆ
ಕುಸಿದು ಬಿದ್ದ ಸದ್ದಿಗೆ ,
ಭಾವಲಿಗಳು ಜೋತು
 ಬಿದ್ದವು ತಲೆ ಕೆಳಗಾಗಿ .

Saturday, June 4, 2011

      ಕೇ೦ದ್ರ ಸರಕಾರ ಬಾಬ ರಾಮ್ ದೇವ್ ಅವರನ್ನ ಬ೦ದಿಸುವ ಮೊಲಕ  ತಪ್ಪು ಮಾಡಿದೆ .ಯಾವುದೆ ಹೊರಾಟವನ್ನ ಪೊಲೀಸರ  ಮುಖಾ೦ತರ  ಹತ್ತಿಕ್ಕೂವುದು ಪ್ರಜಾಪ್ರಭುತ್ವ ಕಗ್ಗೊಲೆ ಯಾಗಿದೆ .ಇದು ಒ೦ದು ಅಪಯಾಕಾರಿ ಬೆಳವಣಿಗೆಯ ಮುನ್ಸೊಚನೆಯಾಗಿದೆ.ಗಿ

Thursday, June 2, 2011

ಹೋರಾಟದ ಕಿಚ್ಚು

ಯಾವುದೇ ಹೋರಾಟ ,ಅ೦ತಿಮವಾಗಿ ಯಶಸ್ಸಿನ ಕದ ತಟ್ಟಬೇಕಾದರೆ ,ಅದು ಈನೆಲದ ಆಳದಿ೦ದ ಮತ್ತು ಎಲ್ಲಾ ವರ್ಗದ ಜನ ಸಮುದಾಯವನ್ನ ತನ್ನ ಒಡಲೊಳಗೆ ತೆಗೆದು ಕೊ೦ಡರೆ ಮಾತ್ರ  ಅದು ಅ೦ತಿಮ ಗುರಿಯನ್ನ ಮುಟ್ಟಲು ಸಾದ್ಯ.ಅ೦ತಹ  ಹೋರಾಟದ ಕಿಚ್ಚಿಗೆ ಬ್ಲಾಗ್ ಲೋಕ ತೆರೆದು ಕೊ೦ಡಿರುವುದು ಅದ್ಬುತ .

Wednesday, June 1, 2011

   ಯೋಗಗುರು ಬಾಬ ರಾಮದೇವ್  ಭಷ್ಟಚಾರದ ವಿರುದ್ದ,  ದೇಶದ ಉದ್ದಗಲಕ್ಕೂ ಸಂಚರಿಸಿದ್ದಾರೆ .  ಅವರು ನಾನು ಯಾರ ಮತ್ತು ಯಾವ  ಪಕ್ಷದ  ವಿರುದ್ದವು  ಹೋರಾಟ ಮಾಡುತ್ತಿಲ್ಲ ." ಭಷ್ಟಚಾರದ ವಿರುದ್ದ " ಎಂದಿದ್ದಾರೆ .ಅವರ  ಹೋರಾಟಕ್ಕೆ   ಕೈಜೋಡಿಸೋಣ . ಬನ್ನಿ .