" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Wednesday, March 16, 2011

" ಅಗ್ನಿ ದಿವ್ಯದಂತೆ "

 ಏಕೆ  ?
ಈ ಪರಿ   ವ್ಯಗ್ರ ನಾಗಿ  ಮುನಿದೆ
ಫೆಸಿಪಿಕ್.   
ಅವರು ಮಾಡಿದ ತಪ್ಪಾದರು
 ಏನು ?
 ನೀನು ಹೇಳಿದ್ದು ಖರೆ .
 ಅಣು  ರಿಯಾಕ್ಟರಗಳನ್ನ 
 ಸ್ಥಾಪಿಸ    ಬೇಡಿರೆಂದು  ಹೇಳಿದ್ದೆ , 
.ಅದೊಂದು ತಪ್ಪು ಮಾಡಿದರು. 
,ಅದಕ್ಕೆನೀನು  ಈ ಪರಿ ಮುನಿದು 
 ಮುಗಿಲೆತ್ತರದ
 ರಕ್ಕಸ ಅಲೆಗಳನ್ನ  ಸೃಷ್ಟಿಸಿ
 ಅವರ
 ಮನೆ- ಮನಸ್ಸು
 ಗುಡಿ- ಗುಂಡಾರ
 ಅಸೆ -ಕನಸು
 ಮಾತ್ರವಲ್ಲ
.ಅವರ ಇಡಿ ಬದುಕನ್ನ
 ಗುಡಿಸಿ ಬಿಟ್ಟಿಯಲ್ಲ  
 ಅವರದಲ್ಲದ ಅಪರಾದಕ್ಕೆ  
 ತಪಿಲ್ಲದ  ತಪ್ಪಿಗೆ 
 ನೀನು  ಇಸ್ಟೋಂದು 
 ಕ್ರೂರಿ  ಯಾಗಬಹುದಾ..
 ಭೂಮಿ  ತಾಯಿ ಗುಡಿಗಿದ್ದು
 ಸತ್ಯ .
 ಚಂದ್ರ  .ಆಸೆ ಕಂಗಳಿಂದ  
 ಭೂಮಿಯತ್ತ    ತೆವಳುತ್ತಿರವುದು .........
 ಸತ್ಯ .
.ಆದರೆ  ನಿನ್ನ ಆಪೋಶನಕ್ಕೆ
 ಬಲಿಯಾದವರ ಆತ್ಮಗಳಿಗೆ 
 ಉತ್ತರ ಕೊಡುವವರಾರು  ?
 ಒಂದು ನೆನಪಿರಲಿ ನಿನಗೆ 
ಇತಿಹಾಸದ ಪುಟವನ್ನ ತೆರೆದು ನೋಡು
 ಹೇಳಿ ಹೆಸರಿಲ್ಲವಾದ
 ಜಪಾನಿಯರು
 ಮತ್ತ್ತೆ- ಮತ್ತೆ ಎದ್ದು  ನಿ೦ತ  ಪರಿ 
  ನೋಡುತ್ತಿರು ನೀನು .
 ನಿನ್ನ ಕಾಲಗರ್ಭದೊಳಕ್ಕೆ ಹೂತಿಟ್ಟು
 " ಅಗ್ನಿ  ದಿವ್ಯದಂತೆ "  
 ಅವರು ಬೆಳೆದು ನಿಲ್ಲುವ ಪರಿ 
.ಅದಕ್ಕೆ ಅವರನ್ನ
 ಜಪಾನಿಯರು ಎಂದು ಕರೆಯುವುದು .     

Tuesday, March 8, 2011

ಕೈ ಜೋಡಿಸಿ ಪ್ರತಿಭಟನೆಗೆ

 ಟಿವಿ ಆನ್ ಮಾಡಿದರೆ.ಪತ್ರಿಕೆಗಳ  ಪುಟ ತೆಗೆದರೆ ಮನಸ್ಸು  ಅವಮಾನದಿಂದ  ಕುಗ್ಗಿ  ಹೋಗುತದೆ  ,ಪಿ ಹೆಚ್ ಡಿ     ಪದವಿ ಎಂಬುದುದೆ  ಒಂದು  ಘನತೆಯನ್ನ   ಪಡೆದಿತ್ತು   ಆದರೆ   ಈಗ  .................  
     ನಿಜಕ್ಕೂ ಇಂಥ ಪರಿಸ್ತಿತಿ ನಿರ್ಮಾಣವಾದದ್ದು ನಿನ್ನೆ -ಮೊನ್ನೆಯಲ್ಲ  ಶೈಷಣಿಕ  ದೇಗುಲಗಳಾಗ  ಬ್ಬೆಕ್ಕಿದ್ದ .   ವಿಧ್ಯಾನಿಲಯಗಳು   ,ಜಾತಿ  ಹಣ  ಬಲದ  ಮೇಲೆ  ನಡೆದು ಬಂದ  ಮಂದಿ  ಇನ್ನೆ೦ಥ   ವಾತವರಣ  ನಿರಿಮಿಸಲು   ಸಾದ್ಯ  ಹೇಳಿ . 
     ಇದಕ್ಕೆಲ ನಮ್ಮ -ನಿಮ್ಮೆಲರ ಮೌನ ಸಮ್ಮತಿ ಕೂಡ ಇತ್ತು .ಕಾರಣ ಕರ್ನಾಟಕ ದಲ್ಲಿ ಯಾವ -ಯಾವ ಜಾತಿಆದ್ದಾರಿತ ಸರ್ಕಾರಗ್ಲಿಳಿದ್ದ ವೂ ಅಂತಹ ಜಾತಿಗೆ  ,ಹತ್ತಿರವಾದವರೆ  ಕುಲಾದಿಪತಿಗ್ಲಾಳಾಗಿ  ಆಸೀನರಾದ.......ಮೇಲೆ ...ಪತಿತರನ್ನ   ತುಂಬಿಸಿ ಕೊಂಡ ಫಲವಿದು  
    ಆದರೆ ಒಂದು  ಸಮದಾನದ  ಸಂಗತಿ ಬ್ಲಾಗ್ ಲೋಕದಲ್ಲಿ ಪ್ರತಿಭಟನೆಯ   ದನಿ ಎತ್ತಿರವುದು.  ಬರುವ ನಾಳೆಗಳು ಸುಂದರ ವಾಗಬೇಕಾದರೆನೀವು ಕೈ ಜೋಡಿಸಿ  ಪ್ರತಿಭಟನೆಗೆ .ವಂದನೆಗಳು .     

Sunday, March 6, 2011

ಕರ್ನಾಟಕದ  ಹೆಣ್ಣುಮಗಳು  ಅರುಣ್ ಶಾನಬಾಗ್ ೩೭ ವರ್ಷಗಳ  ಹಿಂದೆ  ವಾರ್ಡ್ಬಾ ಬಾಯ್  ಅತ್ಯ ಚಾರಕ್ಕೆ  ಬಲಿಯಾಗಿ , ಅಂದಿನಿ೦ದ  ಇಂದಿನ  ತನಕ  ಆ  ಹೆಣ್ಣು  ಮಗಳು  ಚೇತರಿಸಿಕೊಳ್ಳಲು  ಸಾದ್ಯವಾಗಲೆ ಇಲ್ಲ .೩೭ ವರ್ಷಗಳಿಂದ ಜೀವ ಶವವಾಗಿ
 ನರ ಳು ತ್ತಿದ್ದಾರೆ . ಅದರೊ ಟ್ಟಿಗೆ  ಇಡಿ  ಮನುಕುಲ ನರಳುತಿದೆ -ಇಂದು  ಆ  ಹೆಣ್ಣುಮಗಳ  ದಯಾ ಮರಣದ  ತೀರ್ಪು ಹೊರಬಿಳಲಿದೆ . 

Friday, March 4, 2011

ಆಪೋಶನ ಮತ್ತು ವಸಂತ

ಅಂತರಂಗದ  
ಎದೆಯೊಳಗೆ
ನಿಗಿ ನಿಗಿ ಬೆಂಕ್ಕಿ  ಜ್ವಾಲೆ 
ಆರುತ್ತಲೆ ಇಲ್ಲ   
 ಅದು ಇನ್ನು ಇನ್ನು
 ಜ್ವಲಿಸುತಲೇ  ಇದೆ
 ಅಂದು ಸರಿ ಯೆನಿಸಿದ್ದು
 ಇಂದು  ಯಾಕೋ   ತಪ್ಪೆನಿಸುತ್ತಿದೆ .
 ಖರೆ ಹೇಳುತ್ತೇನೆ ,
 ನಾನು ತಿಳಿದು ಮಾಡಿದ ತಪ್ಪಲ್ಲ
 ಅಂದಿನ ಕಾಲ ದಿನ ಮಾನ ಗಳೇ   ಹಾಗೆ 
ಅಂದು ಸರಿ ...ಇಂದು ತಪ್ಪು ...ಮುಂದೆ .....?
 ಆಶ್ಚರ್ಯವೆಂದರೆ
 ಎದೆಯೊಳಗಿನ 
ಬೆಂಕಿ  ಜ್ವಾಲೆ  ಇನ್ನು ನಿಗಿ ನಿಗಿ 
.ಅಂದು ನೆಟ್ಟ    ಬೀಜಗಳೆಲ್ಲಾ 
 ಮೊಳಕೆ   ಹೊಡೆದು ......  ಮರಗಳಾಗಿ
.ಇಂದು  ನೆರಳ     ನಿಡುತ್ತಿ ವೆ
 ಒಮೊಮ್ಮೆ ಸುಮ್ಮನೆ ನಡೆದು
ಹೋಗುತ್ತೇನೆ 
ಅವುಗಳ ಬಳಿಗೆ .
,ಅವು ನನ್ನ ನೋಡಿ
 ಹೆಮ್ಮೆಯಿಂದ ನಕ್ಕಂತೆ  ಅನಿಸುತ್ತದೆ .
ಜಾ ಗತೀ ಕರಣ,ಉದಾರೀ ಕರಣ ,ದ  .
 ಸುನಾಮಿಗೆ ಸಿಕ್ಕ ನನ್ನೂರು ...
 ಭೂಪಟದಿಂದಲೇ
 ಕಾಣೆಯಾಗ ಬಹುದೆಂದು
 ಆತಂಕದಿಂದ ಅವುಗಳೆಡೆಗೆ ನಡೆದೇ ...
.ಯಾಕೋ ಅವುಗಳ ಕಂಣಿದ ಕಣ್ಣೀರು
 ನಿಲ್ಲುವ ಸೂಚನೆ ಇಲ್ಲ .  
 ಯಾಕೋ ನನ್ನೆದೆಯೊಳಗಿನ
 ಬೆಂಕಿಯಜ್ವಾಲೆ ಸುನಾಮಿಯಂತೆ 
 ಎತ್ಹರ  ಎತ್ಹರಕ್ಕೆ ಬೆಳೆದು ,
 ಜಾ ಗತೀ ಕರಣ ,ಉದಾರೀ ಕರಣವನ್ನ
  ಆಪೋಶನ ತೆಗೆದು  ಕೊಳ್ಳುವುದನ್ನ ಕಂಡು
 .ವಸಂತ  ಮೆಲ್ಲ --ಮೆಲ್ಲನೆ ನಡೆದು ಬಂದ ,



     

Thursday, March 3, 2011

, " ಕರ್ನಾಟಕಲ್ಲಿ ಮೊದಲ ಬಲಿ ಪಡೆದಿದೆ "

  ಕರ್ನಾಟಕದ   ನೆಲದಲ್ಲಿ  ಮೊದಲ ಮರ್ಯಾದ  ಹತ್ಯ  ನಡೆದು  ಹೋಗಿದೆ . ಇದು ನಿಜಕ್ಕೂ ಆತಂಕ ಮೂಡಿಸಿದೆ .  ಉತ್ತರ ಭಾರತದಲ್ಲಿ , ಸಾಮನ್ಯ   ವಾದ    ಮರ್ಯಾದ  ಹತ್ಯ , " ಕರ್ನಾಟಕಲ್ಲಿ  ಮೊದಲ  ಬಲಿ  ಪಡೆದಿದೆ " 
 ಅಂತರಜಾತಿ  ವಿವಾಹ ವಾಗಿದ್ದ  ,ತಾಯಿ    ಮತ್ತು  ಎಳೆ ಕಂದಮ್ಮ ಜೀವ   ತೆತಿದ್ದಾರೆ  .ಇದರ ವಿರುದ್ದ ನಾವು   ಪ್ರಾಮಾಣಿಕ   ದನಿ ಏತಲ್ಲಿಲ ಎಂದರೆ ಉತ್ತರ ಭಾರತದಲ್ಲಿ ಸಾಮನ್ಯ   ವಾದ    ಈಮರ್ಯಾದ   ಹತ್ಯ ನಮ್ಮಲಿ  ಅತಿ  ಸಾಮನ್ಯ ಘಟನೆ ಯಾಗುವ ಮುನ್ನಹೂ ಹೂಮ್ಮು ,ಮಾನವಿಯಾ ಅಂತಕರಣದಿಂದ  ಬರಯುವ & ಓದುವ ಮನಸ್ಸುಗಳು  ಖಚಿತ  ಹಾಗೂ "  ದಿಟ್ಟ ದನಿ "  ಹೂರ ಹೂಮ್ಮು ವುದೆಂದು ನಂಬಿದ್ದನೆ .          .

Tuesday, March 1, 2011

ಮಹಾಶಿವರಾತ್ರಿಯ ಶುಭಾಶಯಗಳು