" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Friday, June 24, 2011

ಗಬ್ಬದ ಜಾತ್ರೆಯಲ್ಲಿ


ಬದುಕ ಜಾತ್ರೆಯಲ್ಲಿ
ಚಲ್ಲಿದ ಮರುಗ-ಜವನಗಳ
ಗಮ್ಮೆನ್ನುವ ಸುವಾಸನೆ
ಜಾತ್ರೆ ತು೦ಬಾ ಹರಡಿದ ದೂಳಿನಲ್ಲಿ
ಬೆರವಗಳಿಗೆಯಲ್ಲಿ
ಬದುಕ ಬಸಿರ ಕಟ್ಟಿದ್ದ
ಅವರ ಕನಸುಗಳ ಜಾತ್ರೆ .
ತೇರ ಎಳವ ಮ೦ದಿ
ಬೀರು ಬ್ರಾ೦ದಿಯಲ್ಲಿ
ಓಲಾಡುವಾಗ
ರಥವೇರಿದ್ದ
ದೇವರು ಬೇವರತೊಡಗಿದಾಗ
ಪಾತರಗಿತ್ತಿ ರೆಕ್ಕೆಬಿಚ್ಚಿ
ಗಗನ ದತ್ತ ಮುಖ ಮಾಡಿತ್ತು
ಅದಾನ - ಇದಾನ ಮೈದಾನದಲ್ಲಿ
ಜಾತ್ರೆಯ ರಾತ್ರಿ
ತಣ್ಣಗೆ  ಜಾರತೊಡಗಿದಾಗ
ಗಬ್ಬಕ್ಕೆ
ಮೈ ಮುದಗೊ೦ಡು
ಮುದುಡಿ ಕೊಳ್ಳುವ ಗಳಿಗೆಯಲ್ಲಿ
ಸೂರ್ಯ
ನಿದಾನಕ್ಕೆ ಮೈಮುರಿಯುತ್ತ
ಮೇಲೆಳುವ ಹೊತ್ತು
ಕೆನೆ ಕೆನೆದು ಸುಸ್ತಾದ ಕುದುರೆ
ಕುಸಿದು ಬಿದ್ದ ಸದ್ದಿಗೆ ,
ಭಾವಲಿಗಳು ಜೋತು
 ಬಿದ್ದವು ತಲೆ ಕೆಳಗಾಗಿ .

1 comment: