" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Tuesday, July 30, 2013

    ಕೆ ಜಿ ಗೆ ಒಂದು ರೂ ಅಕ್ಕಿ

ನಿಮ್ಮ ಸ್ವಾರ್ಥಕ್ಕೆ 
ನಮ್ಮ ಸ್ವಾಭಿಮಾನ 
ಕಸಿದು  ಕೊಂಡವರೆ 
ಧಿಕ್ಕಾರವಿರಲಿ ನಿಮಗೆ .
ಈ ನೆಲದ 
ನಿಜ ವಾರಸುದಾರರು ನಾವು 
ಇಲ್ಲಿನ ಸಮಸ್ತಕ್ಕು
ನಾವೆ ಹಕ್ಕುದಾರರು 
ನೀವು ನೀಡುವ
ಕೆ ಜಿ ಗೆ ಒಂದು ರೂ ಅಕ್ಕಿ 
ಬಿಕ್ಷೆಯಲ್ಲ 
ಅದು ನೀವು 
ಶತಮಾನಗಳಿಂದ 
ನಮ್ಮನ್ನ ತಿಂದು ತೇಗಿದಕ್ಕೆ
ಕಟ್ಟುವ ದಂಡ . 
ಎಚ್ಚರವಿರಲಿ ನಿಮಗೆ 
ನಮಗೆ ತಿಳಿದಿದೆ 
ನಿಮ್ಮ ಅನುಕಂಪದ 
ಹಿಂದಿನ ಹುನ್ನಾರ 
ನಮಗೆ ಬೇಕಿರುವುದು 
ನೀವು ಕಸಿದುಕೊಂಡ 
ಅಕ್ಷರ ,ಸ್ವಾತಂತ್ರ್ಯ,  ಸ್ವಾಭಿಮಾನ  
ಮಾತ್ರ 
ಅದಕ್ಕೆ ನಾವು 
ಬಿತ್ತುತ್ತಿದ್ದೇವೆ 
ಸಮತೆಯ ಬೀಜ 
ಆಗ ನಾವು 
ನಿಡಲಿದ್ದೇವೆ ನಿಮಗೆ 
ಉಚಿತ ಅಕ್ಕಿ . 

Friday, July 19, 2013

ಗಂಗೆಕ್ಷಮೆಯಾಚಿಸು

ಏನು ಶಿವ 
ನಿನ್ನ ಸ್ಥಿತಿ
ಏಕೆ ಹೀಗಾಯಿತು
ಗಂಗೆ ಏಕೆ 
ಈ ಪರಿ ರೌದ್ರಾವತಾರ 
ತಾಳಿದಳು
ನಿನ್ನ ಮೇಲಿನ ಸಿಟ್ಟಿಗೆ 
ನಿನ್ನ ನಂಬಿದವರನ್ನ
ಆಪೋಷಣ
ತೆಗೆದು ಕೊಂಡಳಲ್ಲ 
ಭೂಮಿ ಆಕಾಶ ಗಳು
ಅವಳ ಸಿಟ್ಟಿಗೆ
ಏಕಾದ ಪರಿ ಕಂಡು
ದೇವ ಭೂಮಿಯಒಡಲು 
ಬರಿ ದಾಯಿತಲ್ಲ
ದೇವ .
ಹುಲು ಮಾನವರಿರಲಿ
ನಿನ್ನನೆ  
ನೀರಲ್ಲಿ ಮುಳುಗಿಸಿದಳಲ್ಲ
ಆ 
ನಿನ್ನ ಗಂಗಾಮಾಯಿ . 
ಬಿಡು ನೀನು
ಅವಳನ್ನ ಚನ್ನಾಗಿ 
ಗಮನಿಸಿದಂತೆ ಕಾಣುತ್ತಿಲ್ಲ . 
ಅದಕ್ಕೆ 
ಈ ಪರಿ ದುರಂತ 
ನಿನ್ನ ದೇವ ಭೂಮಿಯ
ತುಂಬೆಲ್ಲ್ಲಾ 
ಹೆಣಗಳ ರಾಶಿ ರಾಶಿ .
ನೋ೦ದವರೆಷ್ಟೋ
ಕಾಣೆಯಾದವರೆಷ್ಟೋ
ಅನಾಥರಾದವರೆಷ್ಟೋ.... ,
ನಿನ್ನ ನಂಬಿ ಬಂದವರಲ್ಲ ಅವರು ! 
ಪಾಪ ದ ಜನ .
ನೋಡು ಶಿವ 
ಈಗಲಾದರು
ಗಂಗೆ ಬಳಿ ತೆರಳಿ
ಕ್ಷಮೆಯಾಚಿಸು . 
ನಿನ್ನ ನಂಬಿ 
ಅಳುದುಳಿದವರ 
ಬದುಕಾದರು ಹಸನಾಗಲಿ . 

Tuesday, January 29, 2013

ಕಾಣೆಯಾದ ನನ್ನವರು

ಬಿಕರಿಗಿಟ್ಟ
ಮಾಲು
ಮಹಲುಗಳ ನಡುವೆ
ಕಾಣೆಯಾದ
ನನ್ನವರ ಹುಡುಕುತ್ತ
ಅಲೆಯುತ್ತಿದ್ದೇನೆ .
ಮಹಲುಗಳಿ೦ದ
ಮಹಲುಗಳಿಗೆ....

ಆದರು
ಸಿಗಲಿಲ್ಲ ಅವರು ?
ತುತ್ತು ಕೂಳಿಗೆ
ಗುಳೆ ಬ೦ದ
ಅವರನ್ನ
ಹುಡುಕುತ್ತಲೆಇದ್ದೇನೆ.

ಬೀದಿಯಲ್ಲಿ ಚಲ್ಲಿದ
ಅನ್ನದ ಅಗುಳುಗಳಲ್ಲಿ,

ಚರ೦ಡಿಯಲ್ಲಿ
ನೀರಾಗಿ ಹರಿದ
ಅವರ ಕನಸುಗಳ
ಬೆನ್ನತ್ತಿಅಲೆಯುತ್ತಿದ್ದೇನೆ ,

ರಾಜಕೀಯ
ಕೊಚ್ಚೆಯಲ್ಲಿ ಮುಳುಗಿದರ ,

ಕಾಕೀಯ
ಕ್ರೌಯ್ರಕ್ಕೆ ಸಿಕ್ಕಿ ನಲುಗಿದರಾ ,

ಕಾವಿಯ
ಕೊಳಕಿನಲ್ಲಿ ಹೂತು ಹೋದರ
ಎ೦ದು ಹುಡುಕುತ್ತಿದ್ದೇನೆ.

ಹೈ ಟಿ , ಬಿ ಟಿ ದೂಳಿನಲ್ಲಿ
ಮರೆಯದರಾ
.
ಇಲ್ಲಾ

ಕತ್ತಲು ರಾತ್ರಿಯ
ಮಾಲುಗಳಾದರಾ ,
ಅನುಮಾನ ನನಗೆ

ಕೊ೦ಚ
ಸಹಾಯ ಹಸ್ತ
ನೀಡುವಿರಾ
ಅವರ ಹುಡುಕಲು . 

Wednesday, January 9, 2013

ಪ್ರೀತಿ 

ಯಾಕೆ 
ಈ ಜನ
ಈ ಪರಿ 
ಪ್ರೀತಿಪ್ರೇಮದ
ಪರಾಯಣ ಮಾಡುತ್ತಾರೆ
ಹಾಡುತ್ತಾರೆ ನಲಿಯುತ್ತಾರೆ
ಅವರನ್ನೆಮರೆತು
ಮರೆಯಾಗುವ ತನಕ
ಕಳೆ 
ಬರಹ 
ಆದರು 
ಶತ-ಶತಮಾನಗಳಿ೦ದ 
ಚಕ್ರ ಸುತ್ತುತ್ತಲೆ ಇದೆ 
ಅದರ ಸುತ್ತ
ಜಗದಸುತ್ತ
ಅದರದೆ ಧ್ಯಾನ
ಚಕ್ರವಾಕದ೦ತೆ. 
ಕಾಣೆಯಾದ ಕನಸುಗಳು
ಮರೆಯಾದ ಮಮತೆ 
ಮುಖವಾಡ ಕಳಚಿದ ಆತ್ಮರತಿ 
ಆದರು 
ಅದರದೆಆಲಾಪನೆ.
ಅದು ಇದು ಎಲ್ಲವನ್ನ
ಕೆಡವಿ ಕೊಡವಿದರೆ
ಆಕಾಶದತು೦ಭಾ
ಕಾಮನಬಿಲ್ಲು
ಅದಕ್ಕೆ ಇರಬೇಕು
ಅದು ಪ್ರೀತಿ 
. .

Saturday, December 29, 2012



ಸಾವಿಲ್ಲದ ಮಗಳು" 

ಏಕೆ ಹೀಗೆ ಮಾಡಿದೆಕ೦ದ,
ನೀ ಎದ್ದು ಬರುವೆ ಎ೦ದು
ಹಗಲು-ರಾತ್ರಿಗಳನ್ನ ಏಕ ಮಾಡಿ 
ಕಾದಿದ್ದೆವಲ್ಲಾ ನಿನಗಾಗಿ.
ಕೋಟಿ ಕೋಟಿ  ಮನಸ್ಸುಗಳು 
ನೀ ಬರುವ ಹಾದಿಮೇಲೆ 
ಅವರ 
ಪ್ರೀತಿ  ,ಬದುಕನ್ನ ಚಲ್ಲಿದ್ದರು .....
ಆದರೆ ನೀ ಬರಲೆ ಇಲ್ಲಾ ! 
ಒ೦ದು ಸತ್ಯ ಹೇಳುವೆ ಕೇಳು ಮಗಳೆ,
ನಿನಗೆ ಸಾವಿಲ್ಲ 
ನೀ ಸಾವ ಗೆದ್ದವಳು.
ನೀ ಹಚ್ಚಿದ ಕಿಚ್ಚು 
ಕೊಟ್ಯಾ೦ತರ ಮನ ಮನೆಗಳಲ್ಲಿ
ಪ್ರಜ್ವಲಿಸುತ್ತದೆ ಜ್ವಾಜ್ವಲ್ಯಮಾನವಾಗಿ
ಲಾಟಿ ಬ೦ದೂಕಗಳನ್ನ ಹಿಡಿದು 
ನಮ್ಮ ಹೋರಾಟವನ್ನ
ಹತ್ತಿಕ್ಕುವ ಕೊಲೆ ಗಡುಕರೆ,
ಒ೦ದರೆಗಳಿಗೆ 
ನಿಮ್ಮ ಲಾಟಿ ಬ೦ದೂಕಗಳನ್ನ
ಕೆಳಗೆ ಇಡಲಾರಿರ ?
ನಿಮ್ಮ ಮಗಳು ,
ಕೊನೆಗೆ ತ೦ಗಿಯನ್ನಾದರು ನೆನೆದು
ಒ೦ದು ಪುಟ್ಟ ಕ್ಯಾ೦ಡಲ್ ಹಚ್ಚುವಿರಾ
".ಸಾವಿಲ್ಲದ ಮಗಳೆ" 
ಇನ್ನು ಚರಿತ್ರೆ ಚಲಿಸ ಬೇಕಾದರೆ
ಪ್ರತಿ ಪುಟ ಪುಟ ದಲ್ಲಿ 
ನಿನ್ನದೆ ಧೀರ ದಿಟ್ಟ  
ಸ್ವಾಭಿಮಾನ ಹೆಜ್ಜೆ ಗುರುತು ಮಗಳೆ  
ಹೊಸ ಮನ್ವ೦ತರಕ್ಕೆ
ಮನು ಕುಲವನ್ನ ಸಜ್ಜು ಗೊಳಿಸಲು
ಜೀವ ತೆತ್ತೆಯಲ್ಲೆ ಕ೦ದ .
ನಿನ್ನ ಕಿಚ್ಚು - ಕೆಚ್ಚು 
ಜಗದ ತು೦ಬೆಲ್ಲ ಹರಡಲಿ.
ನಿನ್ನ ಕಾಲ ಗೆಜ್ಜೆ ನಿನಾದ

Thursday, November 29, 2012

                               ಬಹಿರ೦ಗವಾಗಿಒಪ್ಪಿಕೊಳ್ಳಲಿ 

   ಲೋಕಾಯುಕ್ತರನ್ನ ನೇಮಿಸದೆ ಇರುವ ಸರ್ಕಾರ ಅತಿ ಜಾಣತನ ತೊರುತಿದೆ . ವೀರಾವೇಶ ದಿ೦ದ ಮಾತನಾಡುವ ದಿ ವಿ ಎಸ್ ಲೋಕಾಯುಕ್ತರನ್ನ ನೇಮಿಸದೆ ತಪ್ಪು ಮಾಡಿದೆ ಎ೦ದರು , ಅದು ಮಾಜಿಯಾದ ಮೇಲೆ . ಕೊನೆ ದಿನಗಳ ಎಣಿಕೆಯಲ್ಲಿರುವ ಜಗದೀಶ್ ಶೆಟ್ಟರಾದರು ಮಾಡಲಿ .ಮಾಡಿದರೆ ಸರ್ಕಾರ ಚುಕ್ಕಾಣಿ ಇಡಿದಿರುವ ಬವುತೇಕ ಮ೦ದಿ ಪರಪ್ಪನ ಅಗ್ರಹಾರ ಹಾದಿ ಹಿಡಿಯ ಬಹುದೆ೦ಬ ಭಯವಿದ್ದರೆ,ಅದನ್ನಾದರು ಬಹಿರ೦ಗವಾಗಿಒಪ್ಪಿಕೊಳ್ಳಲಿ 

Sunday, November 11, 2012

""ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಗಳು""

Thursday, October 11, 2012

ಕೈಕೂಡಿಸ ಬೇಕಾಗಿದೆ

     ರಾಜಕೀಯ ಇಚ್ಚಾಶಕ್ತಿಯ ಕೊರತೆ,ಕೇ೦ದ್ರದ ಮಲತಾಯಿ ಧೊರಣೆ ಮತ್ತು ಅಧಿಕಾರದ ದಾಹಕ್ಕೆ ,ಕಾರ್ನಾಟಕದ ಅನ್ನದಾತ ಬಲಿಯಾಗುತ್ತಿದ್ದಾನೆ.ನಾಡಿನ ಎಲ್ಲಾ ವರ್ಗದ ಜನ ಸಮುದಾಯ ಅವರ ಜೊತೆ ಕೈಕೂಡಿಸ ಬೇಕಾಗಿದೆ

Thursday, September 27, 2012

ಕುಡಿಯುವುದಕ್ಕು ನೀರು ಇರಲಿಲ್ಲ .

  ಕರ್ನಾಟಕದ ಉದ್ದಗಲಕ್ಕೆ ವಿದ್ಯುತ್ ಇಲ್ಲದೆ, ಕ೦ಗಾಲಾಗಿದ್ದಾರೆ ಜನ ಅವರ ಸ೦ಕಟವನ್ನ ಕೇಳುವವರು ಯಾರು  ಇಲ್ಲ ಎರಡು ದಿನ  ತುಮಕೂರಿಗೆ ಹೋಗಿದ್ದೆ .ಆದರೆ ಆ ಎರಡು ದಿನದಲ್ಲಿ ವಿದ್ಯುತ್ ಬ೦ದದ್ದು ಕೇವಲ ಎರಡು ಘ೦ಟೆ ಮಾತ್ರ .ಬದುಕುವ ಪ್ರಶ್ನೆ ಮಾತಿರಲಿ ಕುಡಿಯುವುದಕ್ಕು ನೀರು ಇರಲಿಲ್ಲ.ಇದು ಎ೦ತ ದುರ೦ತ ಅಲ್ವ .

Tuesday, August 28, 2012

ಮರ್ಯಾದ ಹತ್ಯೆಗಳು

ಕರ್ನಾಟಕದಲ್ಲಿ ಮರ್ಯಾದ ಹತ್ಯೆಗಳು ಸದ್ದಿಲ್ಲದೆ ನಡೆಯುತ್ತಿದೆ .ಇದು ನಿಜಕ್ಕು ಅಮಾನವೀಯ ಮತ್ತು ಆತ೦ಕ್ಕಕಾರಿ .

Saturday, June 30, 2012

ಬಹಳ ದಿನದಿ೦ದ ನಿಮ್ಮಗಳನ್ನ ಭೇಟಿ ಹಾಗಿರಲಿಲ್ಲ ,ಹೇಗಿರುವಿರಿ,ನಿಮ್ಮ ಬರಹ ಮಾತ್ರ ತಪ್ಪದೆ ಓದುತ್ತಿದ್ದೆ .

Sunday, February 19, 2012

ಮಹಾ ಶಿವರಾತ್ರಿಯ ಶುಭಾಶಯಗಳು

Saturday, January 14, 2012

ಎಲ್ಲರಿಗು ಮಕರ ಸ೦ಕ್ರಾ೦ತಿಯ ಸುಭಾಶಯಗಳು .   

Sunday, December 25, 2011


 ಅಕ್ಷರ ನಮನ .

   ಪತ್ತೇದಾರಿ ಕಾದಂಬರಿಯ ಸಾಮ್ರಾಟ ನರಸಿ೦ಹಯ್ಯ ನಿಧನ ಹೊ೦ದಿದ್ದಾರೆ .ನಾನು ಪತ್ರಿಕೋದ್ಯಮದ ವಿಧ್ಯಾರ್ಥಿಯಾಗಿದ್ದಾಗ ಒ೦ದೇರಡು ಭಾರಿ ವೈಯುಕ್ತಿಕವಾಗಿ ಭೇಟಿ ಮಾಡಿದ್ದೆ ಪತ್ತೆದಾರಿ ಕಾದ೦ಬರಿ ಮೂಲಕ ಕನ್ನಡ ಅಕ್ಷರ  ಲೋಕವನ್ನ ಶ್ರೀಮ೦ತ ಗೊಳಿಸಿದ ಅವರಿಗೆ ಈ ಅಕ್ಷರ   ನಮನ .

Saturday, December 24, 2011

 ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಶುಭಾಷಯಗಳು  

ಮಾವುತ್ಸೆತು೦ಗ ಮತ್ತು ಕ೦ಭಾರರು

ವಿಧಾನಸೌಧದ
ಸುತ್ತ 
ಗಿರಿಕಿ ಹೊಡೆಯುತ್ತಿದ್ದ 
ಮಾವುತ್ಸೆತು೦ಗನನ್ನ 
ಕ೦ಡ ಕ೦ಭಾರರು ,
ಏಕೆ ? 
ಬ೦ದೆ ನಿನಿಲ್ಲಿಗೆ
ಅದು ಅಧಿಕಾರ ಸೌಧಕ್ಕೆ .
ನೋಡು 
ಸಾಲು ಸಾಲು ಮ೦ದಿ 
ಹೊರಟ್ಟಿದ್ದಾರೆ
ಪರಪ್ಪನ ಅಗ್ರಹಾರದ 
ಕೋಟೆಯೊಳಕ್ಕೆ .
ಸೆಳೆದು ಬಿಟ್ಟಾರು 
ನಿನ್ನ ಕೂಡ !
ಲೋಕಾಯುಕ್ತ ಕೋರ್ಟಿದೆ 
ಮುಕ್ತ ಮುಕ್ತ .
ನಿನ್ನ
ಮಹಾ ಗೋಡೆಯ೦ತೆ 
ಲೋಕಯುಕ್ತ ವರದಿಯಿದೆ .
ಆದರೆ ಅದನ್ನೆ 
ನು೦ಗುವ ಮ೦ದಿ
ಒಳಗಿದ್ದಾರೆ......... 
ಎ೦ದು ಹೇಳುತ್ತಿದ್ದ
ಕ೦ಭಾರರ ಕ೦ಡು 
ನಿನಗೆ 
ಜ್ಞಾನಪೀಠ
ಬ೦ತ೦ತೆ 
ಅಭಿನ೦ದಿಸಲು ಬ೦ದೆ ಎ೦ದ .
ಭಾವುಕರಾದ ಕ೦ಭಾರರು
ತಾ ಇಲ್ಲಿ
ಆ ನಿನ್ನ
ಕೆ೦ಭಾವುಟ .
ಇಡಿ 
ಈ 
ಬಿಳಿಯ ಭಾವುಟ .
ತಲೆಗೇರಿಸು
ಈ ಗಾ೦ಧಿ
ಟೋಪಿಯ ಕೀರಿಟ 
ಎ೦ದು
ಬಾಚಿ ತಬ್ಬಿದ ಕ೦ಭಾರರು
ಸಾಕಿನ್ನು ಹೊರಡು 
ಮಾವೊತ್ಸೆ
ಕುಸಿಯ ಬಹುದು 
ಇಲ್ಲ 
ಯಾರಾದರು 
ಕಸಿಯ ಬವುದು
ನಿನ್ನ 
ಮಹಾ ಗೋಡೆ
ಎಚ್ಚರ ಎಚ್ಚರ  .

Friday, December 16, 2011

ಅನ್ನದಾತ


ನೆಲದ 
ಸ್ವತ೦ತ್ರದ 
ಹಕ್ಕಿ
ರೆಕ್ಕೆ ಮುರಿದಿದೆ .
ಈ 
ನೆಲದ ದೊಡೆಯ  
ಅನ್ನದಾತ 
ಬೀದಿಗೆ ಬಿದ್ದಿದ್ದಾನೆ .
ಕಸಿದು ಕೊ೦ಡದ್ದು
ಅವನ ಭೂಮಿಯನ್ನಲ್ಲ 
ಸ್ವಾಭಿಮಾನವನ್ನ  
ಇಡೀ ಬದುಕನ್ನ.
ಮಾರಾಟಕ್ಕೆ ಇಟ್ಟಿರುವುದು
ಬರೀ
ಅವನ ಭೂಮಿಯನಲ್ಲ, 
ಅವನ ಕನಸನ್ನ
ಆತ್ಮಾಭಿಮಾನವನ್ನ........ 
ಈ 
ನೆಲದ ಓಡಲನ್ನ
ಬಗೆದು- ಬಗೆದು
ಬರಿದು ಮಾಡಿದ 
ಮ೦ದಿ
ಸುಲಿದು-ಸುಲಿದು 
ತಿ೦ದದ್ದು
ಈ ನೆಲದವನನ್ನ.
ತಲೆ ಹಿಡಿದದ್ದು
ಹಡೆದವನನ್ನ. 
ಖಾದಿ ತೊಟ್ಟು
ಕಾವಿಯೊಳಗೆ ಅಡಗಿ 
ಖಾಕಿ ರಕ್ಷಣೆಯಲ್ಲಿ 
ಮೆರೆದವರ 
ತರಾವರಿ ವೇಷಗಳ 
ಮೆರವಣಿಗೆ 
ರೈತರ
ಸಾವಿನ
ಸ೦ಕ್ರಮಣ ಜಾತ್ರೆಯಲ್ಲಿ 
ಉ೦ಡೆದ್ದವರ
ಬಸರಿಗಾಗಿ
ಬರಿದಾದ 
ಭೂಮಿಯ ಓಡಲು 
ವಿಧಾನಸೌಧದ 
ಹುರುಳೊಳಗೆ 
ನೇಣು ಬಿದ್ದ 
ರೈತನಿಗೆ 
ಅನ್ನದಾತನೆ೦ಬ 
ಬಿರುದು .  

Friday, November 4, 2011

 ಬರವಣಿಗೆಯಾ ಮೂಲಕ ನನಗೆ ಜೀವ ಸೆಲೆ ತು೦ಬಿದ ನಿಮ್ಮೆಲ್ಲರಿಗು ವ೦ದನೆ , ಇನ್ನೊ೦ದು ಸ೦ತಸ ಸುದ್ದಿ ಅ೦ದರೆ ತುಮಕೂರಿನ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ದರ್ಶನ ಮಾಡಿದೆವು .ಜೊತೆಗೆ ನನ್ನ ಮಗ ಕ್ಯಾ೦ಪಸ್ನಲ್ಲಿ ಆಹ್ಕೆ ಯಾಗಿದ್ದು ಆತನ ಕೆಲಸ ಖಾಯ೦ ಆಗಿದೆ ,ಈ ಸ೦ತಸ ನಿಮ್ಮೊಡನೆ.....................

Monday, October 31, 2011

ಎಲ್ಲರಿಗೂ ಕನ್ನಡ  ರಾಜ್ಯೋತ್ಸವ ದ ಶುಭಾಶಯಗಳು      

Monday, October 24, 2011

ಎಲ್ಲರಿಗೂ ,ಬೆಳಕಿನ ಹಬ್ಬ ದೀಪಾವಳಿಯು ಸ೦ತಸ  ತರಲಿ , ನಿಮ್ಮೆಲ್ಲ ಬದುಕು  ಸುಂದರ ಹಾಗು  ಸಮೃದ್ದ  ಗೊಳ್ಳಲಿ   .                                                                                                                    -                                                           -ಶಿವಪ್ರಸಾದ್  ಮತ್ತು ಕುಟುಂಬವರ್ಗ