" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Friday, December 16, 2011

ಅನ್ನದಾತ


ನೆಲದ 
ಸ್ವತ೦ತ್ರದ 
ಹಕ್ಕಿ
ರೆಕ್ಕೆ ಮುರಿದಿದೆ .
ಈ 
ನೆಲದ ದೊಡೆಯ  
ಅನ್ನದಾತ 
ಬೀದಿಗೆ ಬಿದ್ದಿದ್ದಾನೆ .
ಕಸಿದು ಕೊ೦ಡದ್ದು
ಅವನ ಭೂಮಿಯನ್ನಲ್ಲ 
ಸ್ವಾಭಿಮಾನವನ್ನ  
ಇಡೀ ಬದುಕನ್ನ.
ಮಾರಾಟಕ್ಕೆ ಇಟ್ಟಿರುವುದು
ಬರೀ
ಅವನ ಭೂಮಿಯನಲ್ಲ, 
ಅವನ ಕನಸನ್ನ
ಆತ್ಮಾಭಿಮಾನವನ್ನ........ 
ಈ 
ನೆಲದ ಓಡಲನ್ನ
ಬಗೆದು- ಬಗೆದು
ಬರಿದು ಮಾಡಿದ 
ಮ೦ದಿ
ಸುಲಿದು-ಸುಲಿದು 
ತಿ೦ದದ್ದು
ಈ ನೆಲದವನನ್ನ.
ತಲೆ ಹಿಡಿದದ್ದು
ಹಡೆದವನನ್ನ. 
ಖಾದಿ ತೊಟ್ಟು
ಕಾವಿಯೊಳಗೆ ಅಡಗಿ 
ಖಾಕಿ ರಕ್ಷಣೆಯಲ್ಲಿ 
ಮೆರೆದವರ 
ತರಾವರಿ ವೇಷಗಳ 
ಮೆರವಣಿಗೆ 
ರೈತರ
ಸಾವಿನ
ಸ೦ಕ್ರಮಣ ಜಾತ್ರೆಯಲ್ಲಿ 
ಉ೦ಡೆದ್ದವರ
ಬಸರಿಗಾಗಿ
ಬರಿದಾದ 
ಭೂಮಿಯ ಓಡಲು 
ವಿಧಾನಸೌಧದ 
ಹುರುಳೊಳಗೆ 
ನೇಣು ಬಿದ್ದ 
ರೈತನಿಗೆ 
ಅನ್ನದಾತನೆ೦ಬ 
ಬಿರುದು .  

1 comment:

  1. ಮೂಲ ಭೂತ ಅವಶ್ಯಕತೆಯಾದ ಅನ್ನ ಬೆಳೆಯುವ ಅನ್ನದಾತನನ್ನು ಕಡೆಗಣಿಸುವುದು ಯಾವ ಬುದ್ಧಿವಂತಿಕೆ?ಚೆಂದದ ಕವನ.

    ReplyDelete