" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Tuesday, July 30, 2013

    ಕೆ ಜಿ ಗೆ ಒಂದು ರೂ ಅಕ್ಕಿ

ನಿಮ್ಮ ಸ್ವಾರ್ಥಕ್ಕೆ 
ನಮ್ಮ ಸ್ವಾಭಿಮಾನ 
ಕಸಿದು  ಕೊಂಡವರೆ 
ಧಿಕ್ಕಾರವಿರಲಿ ನಿಮಗೆ .
ಈ ನೆಲದ 
ನಿಜ ವಾರಸುದಾರರು ನಾವು 
ಇಲ್ಲಿನ ಸಮಸ್ತಕ್ಕು
ನಾವೆ ಹಕ್ಕುದಾರರು 
ನೀವು ನೀಡುವ
ಕೆ ಜಿ ಗೆ ಒಂದು ರೂ ಅಕ್ಕಿ 
ಬಿಕ್ಷೆಯಲ್ಲ 
ಅದು ನೀವು 
ಶತಮಾನಗಳಿಂದ 
ನಮ್ಮನ್ನ ತಿಂದು ತೇಗಿದಕ್ಕೆ
ಕಟ್ಟುವ ದಂಡ . 
ಎಚ್ಚರವಿರಲಿ ನಿಮಗೆ 
ನಮಗೆ ತಿಳಿದಿದೆ 
ನಿಮ್ಮ ಅನುಕಂಪದ 
ಹಿಂದಿನ ಹುನ್ನಾರ 
ನಮಗೆ ಬೇಕಿರುವುದು 
ನೀವು ಕಸಿದುಕೊಂಡ 
ಅಕ್ಷರ ,ಸ್ವಾತಂತ್ರ್ಯ,  ಸ್ವಾಭಿಮಾನ  
ಮಾತ್ರ 
ಅದಕ್ಕೆ ನಾವು 
ಬಿತ್ತುತ್ತಿದ್ದೇವೆ 
ಸಮತೆಯ ಬೀಜ 
ಆಗ ನಾವು 
ನಿಡಲಿದ್ದೇವೆ ನಿಮಗೆ 
ಉಚಿತ ಅಕ್ಕಿ . 

Friday, July 19, 2013

ಗಂಗೆಕ್ಷಮೆಯಾಚಿಸು

ಏನು ಶಿವ 
ನಿನ್ನ ಸ್ಥಿತಿ
ಏಕೆ ಹೀಗಾಯಿತು
ಗಂಗೆ ಏಕೆ 
ಈ ಪರಿ ರೌದ್ರಾವತಾರ 
ತಾಳಿದಳು
ನಿನ್ನ ಮೇಲಿನ ಸಿಟ್ಟಿಗೆ 
ನಿನ್ನ ನಂಬಿದವರನ್ನ
ಆಪೋಷಣ
ತೆಗೆದು ಕೊಂಡಳಲ್ಲ 
ಭೂಮಿ ಆಕಾಶ ಗಳು
ಅವಳ ಸಿಟ್ಟಿಗೆ
ಏಕಾದ ಪರಿ ಕಂಡು
ದೇವ ಭೂಮಿಯಒಡಲು 
ಬರಿ ದಾಯಿತಲ್ಲ
ದೇವ .
ಹುಲು ಮಾನವರಿರಲಿ
ನಿನ್ನನೆ  
ನೀರಲ್ಲಿ ಮುಳುಗಿಸಿದಳಲ್ಲ
ಆ 
ನಿನ್ನ ಗಂಗಾಮಾಯಿ . 
ಬಿಡು ನೀನು
ಅವಳನ್ನ ಚನ್ನಾಗಿ 
ಗಮನಿಸಿದಂತೆ ಕಾಣುತ್ತಿಲ್ಲ . 
ಅದಕ್ಕೆ 
ಈ ಪರಿ ದುರಂತ 
ನಿನ್ನ ದೇವ ಭೂಮಿಯ
ತುಂಬೆಲ್ಲ್ಲಾ 
ಹೆಣಗಳ ರಾಶಿ ರಾಶಿ .
ನೋ೦ದವರೆಷ್ಟೋ
ಕಾಣೆಯಾದವರೆಷ್ಟೋ
ಅನಾಥರಾದವರೆಷ್ಟೋ.... ,
ನಿನ್ನ ನಂಬಿ ಬಂದವರಲ್ಲ ಅವರು ! 
ಪಾಪ ದ ಜನ .
ನೋಡು ಶಿವ 
ಈಗಲಾದರು
ಗಂಗೆ ಬಳಿ ತೆರಳಿ
ಕ್ಷಮೆಯಾಚಿಸು . 
ನಿನ್ನ ನಂಬಿ 
ಅಳುದುಳಿದವರ 
ಬದುಕಾದರು ಹಸನಾಗಲಿ . 

Tuesday, January 29, 2013

ಕಾಣೆಯಾದ ನನ್ನವರು

ಬಿಕರಿಗಿಟ್ಟ
ಮಾಲು
ಮಹಲುಗಳ ನಡುವೆ
ಕಾಣೆಯಾದ
ನನ್ನವರ ಹುಡುಕುತ್ತ
ಅಲೆಯುತ್ತಿದ್ದೇನೆ .
ಮಹಲುಗಳಿ೦ದ
ಮಹಲುಗಳಿಗೆ....

ಆದರು
ಸಿಗಲಿಲ್ಲ ಅವರು ?
ತುತ್ತು ಕೂಳಿಗೆ
ಗುಳೆ ಬ೦ದ
ಅವರನ್ನ
ಹುಡುಕುತ್ತಲೆಇದ್ದೇನೆ.

ಬೀದಿಯಲ್ಲಿ ಚಲ್ಲಿದ
ಅನ್ನದ ಅಗುಳುಗಳಲ್ಲಿ,

ಚರ೦ಡಿಯಲ್ಲಿ
ನೀರಾಗಿ ಹರಿದ
ಅವರ ಕನಸುಗಳ
ಬೆನ್ನತ್ತಿಅಲೆಯುತ್ತಿದ್ದೇನೆ ,

ರಾಜಕೀಯ
ಕೊಚ್ಚೆಯಲ್ಲಿ ಮುಳುಗಿದರ ,

ಕಾಕೀಯ
ಕ್ರೌಯ್ರಕ್ಕೆ ಸಿಕ್ಕಿ ನಲುಗಿದರಾ ,

ಕಾವಿಯ
ಕೊಳಕಿನಲ್ಲಿ ಹೂತು ಹೋದರ
ಎ೦ದು ಹುಡುಕುತ್ತಿದ್ದೇನೆ.

ಹೈ ಟಿ , ಬಿ ಟಿ ದೂಳಿನಲ್ಲಿ
ಮರೆಯದರಾ
.
ಇಲ್ಲಾ

ಕತ್ತಲು ರಾತ್ರಿಯ
ಮಾಲುಗಳಾದರಾ ,
ಅನುಮಾನ ನನಗೆ

ಕೊ೦ಚ
ಸಹಾಯ ಹಸ್ತ
ನೀಡುವಿರಾ
ಅವರ ಹುಡುಕಲು . 

Wednesday, January 9, 2013

ಪ್ರೀತಿ 

ಯಾಕೆ 
ಈ ಜನ
ಈ ಪರಿ 
ಪ್ರೀತಿಪ್ರೇಮದ
ಪರಾಯಣ ಮಾಡುತ್ತಾರೆ
ಹಾಡುತ್ತಾರೆ ನಲಿಯುತ್ತಾರೆ
ಅವರನ್ನೆಮರೆತು
ಮರೆಯಾಗುವ ತನಕ
ಕಳೆ 
ಬರಹ 
ಆದರು 
ಶತ-ಶತಮಾನಗಳಿ೦ದ 
ಚಕ್ರ ಸುತ್ತುತ್ತಲೆ ಇದೆ 
ಅದರ ಸುತ್ತ
ಜಗದಸುತ್ತ
ಅದರದೆ ಧ್ಯಾನ
ಚಕ್ರವಾಕದ೦ತೆ. 
ಕಾಣೆಯಾದ ಕನಸುಗಳು
ಮರೆಯಾದ ಮಮತೆ 
ಮುಖವಾಡ ಕಳಚಿದ ಆತ್ಮರತಿ 
ಆದರು 
ಅದರದೆಆಲಾಪನೆ.
ಅದು ಇದು ಎಲ್ಲವನ್ನ
ಕೆಡವಿ ಕೊಡವಿದರೆ
ಆಕಾಶದತು೦ಭಾ
ಕಾಮನಬಿಲ್ಲು
ಅದಕ್ಕೆ ಇರಬೇಕು
ಅದು ಪ್ರೀತಿ 
. .

Saturday, December 29, 2012



ಸಾವಿಲ್ಲದ ಮಗಳು" 

ಏಕೆ ಹೀಗೆ ಮಾಡಿದೆಕ೦ದ,
ನೀ ಎದ್ದು ಬರುವೆ ಎ೦ದು
ಹಗಲು-ರಾತ್ರಿಗಳನ್ನ ಏಕ ಮಾಡಿ 
ಕಾದಿದ್ದೆವಲ್ಲಾ ನಿನಗಾಗಿ.
ಕೋಟಿ ಕೋಟಿ  ಮನಸ್ಸುಗಳು 
ನೀ ಬರುವ ಹಾದಿಮೇಲೆ 
ಅವರ 
ಪ್ರೀತಿ  ,ಬದುಕನ್ನ ಚಲ್ಲಿದ್ದರು .....
ಆದರೆ ನೀ ಬರಲೆ ಇಲ್ಲಾ ! 
ಒ೦ದು ಸತ್ಯ ಹೇಳುವೆ ಕೇಳು ಮಗಳೆ,
ನಿನಗೆ ಸಾವಿಲ್ಲ 
ನೀ ಸಾವ ಗೆದ್ದವಳು.
ನೀ ಹಚ್ಚಿದ ಕಿಚ್ಚು 
ಕೊಟ್ಯಾ೦ತರ ಮನ ಮನೆಗಳಲ್ಲಿ
ಪ್ರಜ್ವಲಿಸುತ್ತದೆ ಜ್ವಾಜ್ವಲ್ಯಮಾನವಾಗಿ
ಲಾಟಿ ಬ೦ದೂಕಗಳನ್ನ ಹಿಡಿದು 
ನಮ್ಮ ಹೋರಾಟವನ್ನ
ಹತ್ತಿಕ್ಕುವ ಕೊಲೆ ಗಡುಕರೆ,
ಒ೦ದರೆಗಳಿಗೆ 
ನಿಮ್ಮ ಲಾಟಿ ಬ೦ದೂಕಗಳನ್ನ
ಕೆಳಗೆ ಇಡಲಾರಿರ ?
ನಿಮ್ಮ ಮಗಳು ,
ಕೊನೆಗೆ ತ೦ಗಿಯನ್ನಾದರು ನೆನೆದು
ಒ೦ದು ಪುಟ್ಟ ಕ್ಯಾ೦ಡಲ್ ಹಚ್ಚುವಿರಾ
".ಸಾವಿಲ್ಲದ ಮಗಳೆ" 
ಇನ್ನು ಚರಿತ್ರೆ ಚಲಿಸ ಬೇಕಾದರೆ
ಪ್ರತಿ ಪುಟ ಪುಟ ದಲ್ಲಿ 
ನಿನ್ನದೆ ಧೀರ ದಿಟ್ಟ  
ಸ್ವಾಭಿಮಾನ ಹೆಜ್ಜೆ ಗುರುತು ಮಗಳೆ  
ಹೊಸ ಮನ್ವ೦ತರಕ್ಕೆ
ಮನು ಕುಲವನ್ನ ಸಜ್ಜು ಗೊಳಿಸಲು
ಜೀವ ತೆತ್ತೆಯಲ್ಲೆ ಕ೦ದ .
ನಿನ್ನ ಕಿಚ್ಚು - ಕೆಚ್ಚು 
ಜಗದ ತು೦ಬೆಲ್ಲ ಹರಡಲಿ.
ನಿನ್ನ ಕಾಲ ಗೆಜ್ಜೆ ನಿನಾದ

Thursday, November 29, 2012

                               ಬಹಿರ೦ಗವಾಗಿಒಪ್ಪಿಕೊಳ್ಳಲಿ 

   ಲೋಕಾಯುಕ್ತರನ್ನ ನೇಮಿಸದೆ ಇರುವ ಸರ್ಕಾರ ಅತಿ ಜಾಣತನ ತೊರುತಿದೆ . ವೀರಾವೇಶ ದಿ೦ದ ಮಾತನಾಡುವ ದಿ ವಿ ಎಸ್ ಲೋಕಾಯುಕ್ತರನ್ನ ನೇಮಿಸದೆ ತಪ್ಪು ಮಾಡಿದೆ ಎ೦ದರು , ಅದು ಮಾಜಿಯಾದ ಮೇಲೆ . ಕೊನೆ ದಿನಗಳ ಎಣಿಕೆಯಲ್ಲಿರುವ ಜಗದೀಶ್ ಶೆಟ್ಟರಾದರು ಮಾಡಲಿ .ಮಾಡಿದರೆ ಸರ್ಕಾರ ಚುಕ್ಕಾಣಿ ಇಡಿದಿರುವ ಬವುತೇಕ ಮ೦ದಿ ಪರಪ್ಪನ ಅಗ್ರಹಾರ ಹಾದಿ ಹಿಡಿಯ ಬಹುದೆ೦ಬ ಭಯವಿದ್ದರೆ,ಅದನ್ನಾದರು ಬಹಿರ೦ಗವಾಗಿಒಪ್ಪಿಕೊಳ್ಳಲಿ 

Sunday, November 11, 2012

""ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಗಳು""